ರಾಷ್ಟ್ರಪತಿ ಆಡಳಿತ

ರಾಷ್ಟ್ರಪತಿ ಆಡಳಿತ

ಭಾರತದ ಸಂವಿಧಾನದ ೩೫೬ರ ಪ್ರಕಾರ ಯಾವುದೇ ರಾಜ್ಯದಲ್ಲಿ ಸರ್ಕಾರವು ತನ್ನ ಕಾರ್ಯ ನಿರ್ವಹಿಸಲಾಗದಿದ್ದಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ಆಡಳಿತವನ್ನು ತನ್ನ ಕೈಗೆ ತಗೆದುಕೊಳ್ಳುವಂತಹ ಅಧಿಕಾರ.

*.ರಾಷ್ಟ್ರಪತಿ ಆಡಳಿತ ಎನ್ನುವುದು ಭಾರತೀಯ ಸಂವಿಧಾನದ "ಅನುಚ್ಛೇದ 356"ನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ವಿಧಿಸುವ ಪ್ರಕ್ರಿಯೆಯಾಗಿದೆ.


ಅನುಚ್ಛೇದ 356ರ ಹಿನ್ನಲೆ

ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಭಾರತದ ವಿವಿಧ ಪಾಳೇಗಾರರು, ರಾಜ್ಯಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಚಿಸಿದ್ದು- ಭಾರತ ಸರ್ಕಾರದ ಕಾಯ್ದೆ 1935. ಈ ಕಾಯ್ದೆಯ 93ನೇ ವಿಧಿ ಪ್ರಕಾರ ಆಯಾ ಪ್ರಾಂತ್ಯದ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದೆ ಅಥವಾ ಅಲ್ಲಿ ಅಶಾಂತಿ ತಲೆದೋರಿದೆ ಎಂಬುದು ಖಾತ್ರಿಯಾದರೆ ರಾಜ್ಯಪಾಲರು ಆಯಾ ಪ್ರಾಂತ್ಯದ ಅಧಿಕಾರವನ್ನು ಕೈಗೆತ್ತಿಕೊಂಡು ತಾವೇ ಆಡಳಿತಕಾರ್ಯ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಸಂದರ್ಭದಲ್ಲಿ ಇದನ್ನೇ ಮಾದರಿಯಾಗಿರಿಸಿಕೊಂಡು 356ನೇ ಅನುಚ್ಛೇದವನ್ನು ಸೇರಿಸಲಾಗಿದೆ.


ಅನುಚ್ಛೇದ 356ರ ಬಳಕೆ

ಯಾವುದೇ ರಾಜ್ಯದಲ್ಲಿ ಸರ್ಕಾರ ಬಹುಮತ ಕಳೆದುಕೊಂಡರೆ ರಾಜ್ಯಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ.ಇದರ ಅವಧಿ ಆರು ತಿಂಗಳು.ಈ ಅವಧಿಯೊಳಗೆ ಯಾವ ಪಕ್ಷವೂ ಬಹುಮತ ಸಾಬೀತುಪಡಿಸದಿದ್ದರೆ ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯದ ಕಾರ್ಯನಿರ್ವಹಣೆ ಅಧಿಕಾರ ಚುನಾಯಿತ ಮುಖ್ಯಮಂತ್ರಿ ಬದಲಾಗಿ ರಾಷ್ಟ್ರಪತಿ ಕೈಗೆ ಹೋಗುವುದರಿಂದ ಇದನ್ನು ‘ರಾಷ್ಟ್ರಪತಿ ಆಳ್ವಿಕೆ’ ಎನ್ನಲಾಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಆದ್ದರಿಂದ ಅವರು ಸಲಹೆಗಾರರನ್ನು ನೇಮಿಸಿಕೊಳ್ಳುವ ಮೂಲಕ ರಾಜ್ಯದ ದೈನಂದಿನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ನೀತಿಗಳೇ ಇಂತಹ ರಾಜ್ಯದಲ್ಲಿ ಅನುಸರಿಸಲ್ಪಡುತ್ತವೆ.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು